Bidar INFO/Ads/News :: # Video Ads at Rs.1000 onwards*, . # Online Advertisement @ Rs.1000 onwards,*, . # Website Starts 2000 & Software at Rs.11000 onwards*. # Contact : Marketing Executive 9379888100

 Your IP is : 3.80.223.123

# Post Date ( yyyy / mm / dd ) : 2018-12-27 # Post Time ( H : M : S ): 10:01:46

ಜಾನಪದ ಸಂಸ್ಕøತಿಯಿಂದ ಸಮೃದ್ಧ


# ##


# Category : bidar news : Views : 1222


News Details :

# Description : ಜಾನಪದ ಸಂಸ್ಕøತಿಯಿಂದ ಸಮೃದ್ಧ ಜೀವನ: ಬರೂರ ಬೀದರ, ಡಿ.27 (ಕ.ವಾ):- ಜಾನಪದ ಕಲೆ ಹಾಗೂ ಸಂಸ್ಕøತಿಯಿಂದ ನಮ್ಮ ಜೀವನ ಸಮೃದ್ಧವಾಗಲಿದೆ ಎಂದು ತಾಲೂಕು ಪಂಚಾಯತ ಅಧ್ಯಕ್ಷ ವಿಜಯಕುಮಾರ ಬರೂರ ಅಭಿಪ್ರಾಯ ಪಟ್ಟರು. ನಗರದ ರಂಗಮಂದಿರದಲ್ಲಿ ಗುರುವಾರ ಜರುಗಿದ ಜಾನಪದ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಾಡಿನ ಸಂಸ್ಕøತಿ ಹಾಗೂ ಸಂಪ್ರದಾಯ ಸಿಟಿ ಜನರಿಗೆ ಮಾದರಿಯಾಗಬೇಕಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನೂರಾರು ಆಸ್ಪತ್ರೆಗಳಿದ್ದರೂ ಸರದಿ ಹಾಗೂ ಸಾಲುಗಳು ಹೆಚ್ಚಾಗಿರುತ್ತವೆ. ಇದಕ್ಕೆಲ್ಲ ಸಿಟಿ ಮನುಷ್ಯ ಹೆಚ್ಚಾಗಿ ಅನೇಕ ರೋಗಗಳಿಗೆ ತುತ್ತಾಗಿರುವುದೇ ಮುಖ್ಯ ಕಾರಣ. ಗ್ರಾಮೀಣ ಜನರು ಚೆನ್ನಾಗಿ ಕಾಯಕ ಮಾಡಿ, ಹಾಯಾಗಿ ನಿದ್ರೆ ಮಾಡುವರು. ಅವರ ಬದುಕಿನ ಶೈಲಿ ನಗರವಾಸಿಗಳಿಗೆ ಆದರ್ಶಪ್ರಾಯವಾಗಲಿ ಎಂದು ಹರಸಿದರು. ಬಿ.ಟಾಕಪ್ಪ ಕಣ್ಣೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಮೂಲೆ, ಮೂಲೆಗಳಿಂದ ಜನಪದ ಕಲಾವಿದರು ಇಲ್ಲಿಯ ಕೆಂಪು ಮಣ್ಣಿನ ನಗರಿಗೆ ಆಗಮಿಸಿ ಸಂಸ್ಕøತಿ ವಿನಿಮಯ ಮಾಡಿಕೊಳ್ಳುತ್ತಿರುವರು. ಇದು ದೂರವಿರುವ ನಾಡಿನ ಕಲಾವಿದರನ್ನು ಹತ್ತಿರಕ್ಕೆ ಕರೆಯಿಸಿಕೊಂಡಂತಹ ಅನುಭವ ಇಲ್ಲಿಯ ಜನರಿಗೆ ಆಗುತ್ತದೆ. ಇದು ಕಲಾವಂತಿಕೆ ಶ್ರೀಮಂತಗೊಳ್ಳುವುದರ ಜೊತೆಗೆ ಪರಸ್ಪರ ಸಂಬಂಧಗಳು ಸಹ ಬಲಿಷ್ಟಗೊಳ್ಳುವವು ಎಂದು ಪ್ರತಿಪಾದಿಸಿದರು. ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರುಪಾಕ್ಷ ಗಾದಗಿ ಮಾತನಾಡಿ, ತಾಂತ್ರಿಕ ಜಗತ್ತಿನಲ್ಲಿಂದು ಮನುಷ್ಯ ಮೌನವಾಗಿರುವನು. ವಿಕಾರಾತ್ಮಕ ಗುಣಗಳು ಬೆಳೆದು ವ್ಯಕ್ತಿತ್ವ ವಿಕಸನದಿಂದ ಕುಂಠಿತಗೊಳ್ಳುತ್ತಿರುವ ನಮಗೆ ಜಾನಪದ ಸೊಗಡಿನ ಅನಿವಾರ್ಯತೆ ಇದ್ದು, ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯ ವೃದ್ಧಿಗೂ ಪೂರಕವಾಗಲಿದೆ ಎಂದರು. ಅಕಾಡೆಮಿ ಸದಸ್ಯರಾದ ವಿಜಯಕುಮಾರ ಸೋನಾರೆ, ಪ್ರಕಾಶ ಅಂಗಡಿ, ರಿಜಿಸ್ಟಾರ್ ಸಿದ್ರಾಮ ಶಿಂಧೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಸಾಹಿತಿ ಪಾರ್ವತಿ ಸೋನಾರೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರೂತಿ ಬೌದ್ದೆ, ಮಾದಿಗ ದಂಡೋರಾ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ, ಜಾನಪದ ವಿದ್ವಾಂಸರಾದ ಚಂದ್ರಪ್ಪ ಹೆಬ್ಬಾಳಕರ್, ಮರಿಯಪ್ಪ ಹೊಸಮನಿ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಚಂದ್ರಕುಮಾರ ಮತ್ತು ತಂಡದವರಿಂದ ಹುಲಿ ವೇಷ, ಹನುಮಂತ ನಾಯಕ ಮತ್ತು ತಂಡದವರಿಂದ ಪೂಜಾ ಕುಣಿತ, ಲಕ್ಷ್ಮಣ ಮತ್ತು ತಂಡದವರಿಂದ ತಮಟೆ ವಾದನ, ವೆಂಕಟರಾಮ ಮತ್ತು ತಂಡದಿಂದ ಚಕ್ರಿ ಭಜನೆ, ನಟರಾಜ ಮತ್ತು ತಂಡದಿಂದ ಸೋಮನ ಕುಣಿತ, ಗಣೇಶ ಮತ್ತು ತಂಡದಿಂದ ನಂದಿಧ್ವಜ ಕುಣಿತ, ಚಂದ್ರಪ್ಪ ಹಾಗೂ ತಂಡದಿಂದ ಕೊಂಬು ಕಹಳೆ, ನಾರಾಯಣಪ್ಪ ಹಾಗೂ ತಂಡದಿಂದ ಡೊಳ್ಳು ಕುಣಿತ, ಬಡವ ಗಣಪುಗೌಡ ಹಾಗೂ ತಂಡದಿಂದ ಹಾಲಕ್ಕಿ ಸುಗ್ಗಿ ಕುಣಿತ, ಮಹೇಶ ಮತ್ತು ತಂಡದವರಿಂದ ಪುರವಂತಿಕೆ, ಕಿರಣ ಮತ್ತು ತಂಡದಿಂದ ಕಂಸಾಳೆ, ರಾಜಮ್ಮ ಮತ್ತು ತಂಡದಿಂದ ಪಟಾ ಕುಣಿತ, ಬಿ.ಟಿ ಮಾನವ ಹಾಗೂ ತಂಡದಿಂದ ಕೋಲಾಟ, ಅವಿನಾಶ ಮತ್ತು ತಂಡದಿಂದ ವೀರಗಾಸೆ, ಸಂತೋಷಕುಮಾರ ಮತ್ತು ತಂಡದಿಂದ ಕೋಲುಮೇಳ, ರವಿ ಮತ್ತು ತಂಡದಿಂದ ನಗಾರಿ ವಾದನ, ಬಾಲರಾಜ ಮತ್ತು ತಂಡದಿಂದ ತಮಟೆ ವಾದನ, ಮಧುಕರ ರವಿ ಮತ್ತು ತಂಡದಿಂದ ಡೊಳ್ಳು ಕುಣಿತ, ಆಶಾ ರಾಠೋಡ ಮತ್ತು ತಂಡದಿಂದ ಲಂಬಾಣಿ ಕುಣಿತ, ಯಸುದಾಸ ಅಲಿಯಂಬುರೆ ಅವರಿಂದ ಮುಖವಾಡ ನೃತ್ಯ, ಪವನ ನಾಟೇಕರ ಮತ್ತು ತಂಡದಿಂದ ಜಾನಪದ ಸುಗ್ಗಿ ಕುಣಿತ, ಮಲ್ಲಪ್ಪ ಹೂಗಾರ ಮತ್ತು ತಂಡದಿಂದ ಪುರವಂತಿಕೆ, ಅಂಬರೀಶ ಮತ್ತು ತಂಡದಿಂದ ಹಗಲು ವೇಷ, ಬಸವರಾಜ ಮತ್ತು ತಂಡದಿಂದ ವೀರಗಾಸೆ, ಸಂಜುಕುಮಾರ ಮತ್ತು ತಂಡದಿಂದ ಡೊಳ್ಳು ಕುಣಿತ, ಶಾರೂಬಾಯಿ ಮತ್ತು ತಂಡದಿಂದ ಲಂಬಾಣಿ ಕುಣಿತ, ನಾಗೇಶ ಮತ್ತು ತಂಡದಿಂದ ಗೊಂಬೆ ಕುಣಿತ, ಶೇಷಪ್ಪ ಚಿಟ್ಟಾ ಮತ್ತು ತಂಡದಿಂದ ತಮಟೆ ವಾದನ, ರಾಮಲಿಂಗ ಮತ್ತು ತಂಡದಿಂದ ಡೊಳ್ಳು ಕುಣಿತ, ಶರಣಪ್ಪ ಮತ್ತು ತಂಡದಿಂದ ಚುಟ್ಟಿಕೆ ಮೇಳ, ಸಂಗಮನಾಥ ಮತ್ತು ತಂಡದಿಂದ ಕೋಲಾಟ, ಸೂರ್ಯಕಾಂತ ಮತ್ತು ತಂಡದಿಂದ ತಮಟೆ ವಾದನ, ಶ್ರೀಮಂತ ಮತ್ತು ತಂಡದಿಂದ ಹೆಜ್ಜೆ ಮೇಳ, ನಂಜಪ್ಪ ಮತ್ತು ತಂಡದಿಂದ ಖಣಿ ವಾದನ, ರಾಮನಾಯಕ ಮತ್ತು ತಂಡದಿಂದ ಗೊಂಬೆ ಮೇಳ ಇತ್ಯಾದಿ ಕಲಾ ತಂಡಗಳಿಂದ ಜಾನಪದ ಕಾರ್ಯಕ್ರಮ ಜರುಗಿದವು. ಇದೇ ವೇಳೆ ಶಂಬೆಳ್ಳಿಯ ಪ್ರಭು.ಎಸ್..ವಾಸುದೇವರಿಂದ ಜಾನಪದ ಚಿತ್ರಕಲಾ ಪ್ರದರ್ಶನ, ಗಂಗಮ್ಮ ಫುಲೆ ಅವರಿಂದ ಜಾನಪದ ವಸ್ತು ಪ್ರದರ್ಶನ ಜರುಗಿತು. ದೇವದಾಸ ಚಿಮಕೋಡ ಸ್ವಾಗತಿದರು. ಮಹೇಶ ಗೋರನಾಳಕರ್ ನಿರೂಪಿಸಿದರು. ಎಮ್.ಎಸ್.ಮನೋಹರ್ ವಂದಿಸಿದರು.Venue : bidar,

# Road Map #

ll