Bidar INFO/Ads/News :: # Video Ads at Rs.1000 onwards*, . # Online Advertisement @ Rs.1000 onwards,*, . # Website Starts 2000 & Software at Rs.11000 onwards*. # Contact : Marketing Executive 9379888100

 Your IP is : 3.80.223.123

# Post Date ( yyyy / mm / dd ) : 2018-12-28 # Post Time ( H : M : S ): 10:04:58

ವಿಕಲಚೇತನ ಮಕ್ಕಳಿಗೆ ಸ್ಪೂರ್


# ##


# Category : bidar news : Views : 1147


News Details :

# Description : ವಿಕಲಚೇತನ ಮಕ್ಕಳಿಗೆ ಸ್ಪೂರ್ತಿ ನೀಡಿ: ಆರ್.ರಾಘವೇಂದ್ರ ಬೀದರ, ಡಿ.28 (ಕ.ವಾ):- ಪೋಷಕರು ತಮ್ಮ ವಿಕಲಚೇತನ ಮಕ್ಕಳನ್ನು ಬೇಸರದಿಂದ ಕಾಣದೇ ಅವರಲ್ಲಿ ಸ್ಪೂರ್ತಿ ತುಂಬಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ. ಆರ್.ಅವರು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್, ಬೀದರ ವಕೀಲರ ಸಂಘ ಮತ್ತು ಹರಿ ಓಂ ಜ್ಞಾನದೀಪ ರೂರಲ್ ಎಜುಕೇಷನ್ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಡಿ.28 ರಂದು ನೌಬಾದ ವಿಶ್ವಾಸಧಾಮ ನಗರದಲ್ಲಿರುವ ವಿಶ್ವಾಸ ಬುದ್ದಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರು ಸಾಮಾನ್ಯ ವ್ಯಕ್ತಿಗಳಿಗಿಂತ ಭಿನ್ನವಾಗಿದ್ದು, ಅವರಲ್ಲಿ ಯಾವುದೇ ರೀತಿಯ ಕಲ್ಮಶಗುಣಗಳು ಇರುವುದಿಲ್ಲ ಹಾಗಾಗಿ ಅಂತಹ ಮಕ್ಕಳನ್ನು ತಾತ್ಸಾರದಿಂದ ಕಾಣದಿರಿ. ಅವರಲ್ಲಿಯೂ ಆಘಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ತಿಳಿಸಿದರು. ಅಪ್ಪರಾವ್ ಜ್ಯಾಂತಿ ಪ್ರಾಸ್ತಾವಿಕ ಮಾತನಾಡಿದರು. ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಮಾರುತಿರಾವ ಚಂದನಹಳ್ಳಿಕರ್ ಅಧ್ಯಕ್ಷತೆ ವಹಿಸಿದ್ದರು. ಹರಿ ಓಂ ಜ್ಞಾನದೀಪ ರೂರಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಸಂತೋಷ ಎಂ.ಭಾಲ್ಕೆ, ವೈದ್ಯರಾದ ಭೀಮರಾವ ಸಿಂಗೋಡೆ, ಭಗತ್‍ಸಿಂಗ್ ಬ್ರಿಗೇಡ್‍ನ ಜಸ್‍ಪ್ರೀತ್‍ಸಿಂಗ್, ಶಾಂತಕುಮಾರ ರಾಯಗೋಳ, ವಕೀಲರಾದ ದಯಾನಂದ, ಶಿವರಾಜ ಕಾಡವಾದ, ಪಿ.ಸಂಗಪ್ಪ, ಕಾನೂನು ಸೇವೆಗಳ ಪ್ರಾಧಿಕಾರದ ಶಂಕರೆಪ್ಪ ಜನಕಟ್ಟಿ ಹಾಗು ಇತರರು ಉಪಸ್ಥಿತರಿದ್ದರು. ಬಂಡೆಪ್ಪ ಕಾಡವಾದ ನಿರೂಪಿಸಿದರು. ಭಾನುಶ್ರಿ ಸ್ವಾಗತ ಗೀತೆ ಹಾಡಿದರು. ಒಳಚರಂಡಿ ಸಂಪರ್ಕ ಪಡೆದು ಶುಚಿತ್ವಕ್ಕೆ ಸಹಕರಿಸಿ: ಆನಂದ ಎಲ್.ಎನ್ ಬೀದರ, ಡಿ.28 (ಕ.ವಾ):- ನಗರ ನಿವಾಸಿಗಳು ಒಳಚರಂಡಿಯ ಗೃಹ ಸಂಪರ್ಕ ಪಡೆದು ನಗರದಲ್ಲಿ ಶುಚಿತ್ವ ಕಾಪಾಡಲು ಮುಂದಾಗಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಆನಂದ ಎಲ್.ಎನ್ ಅವರು ತಿಳಿಸಿದರು. ಬೀದರ ನಗರ ಸಭೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಡಿ.27ರಂದು ಬೀದರ್‍ನ ಶಾಸ್ತ್ರಿ ನಗರದ ಉದ್ಯಾನವನದಲ್ಲಿ ನಡೆದ ಅಮೃತ ಯೋಜನೆಯ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರಗಳನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅಮೃತ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಬೀದರ ನಗರದಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದು, ಸಾರ್ವಜನಿಕರು ಈ ಒಳಚರಂಡಿಗೆ ಗೃಹ ಸಂಪರ್ಕವನ್ನು ಪಡೆದುಕೊಳ್ಳಬೇಕು ಎಂದು ಅವರು ಕೋರಿದರು. ಸಾಮಾಜಿಕ ಅಭಿವೃದ್ಧಿ ತಜ್ಞರಾದ ಎಂ.ಜೆ.ದೇವೂರ ಪ್ರಾಸ್ತಾವಿಕವಾಗಿ ಮಾತನಾಡಿ, ಅಮೃತ್ ಯೋಜನೆಯ ಗುರಿ ಮತ್ತು ಉದ್ದೇಶಗಳ ಬಗ್ಗೆ ವಿವರಣೆ ನೀಡಿದರು. ನಗರ ಸಭೆಯ ನಲ್ಮ್ ಯೋಜನೆಯ ಸಮುದಾಯ ವ್ಯವಹಾರಗಳ ಅಧಿಕಾರಿ ಮಾರ್ಕ್ ಅವರು ಮಾತನಾಡಿ, ಮಹಿಳಾ ಸ್ವಸಹಾಯ ಸಂಘದÀ ಎಲ್ಲಾ ಸದಸ್ಯರುಗಳು ಅಮೃತ್ ಯೋಜನೆಯನ್ನು ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಸ್.ಎಸ್ ರಾಯಕೋಟಿ, ಸಹಾಯಕ ಅಭಿಯಂತರರಾದ ಎಂ.ಡಿ ಜಾಫರ್, ನಗರ ಸಭೆಯ ಅಮೃತ್ ಯೋಜನೆಯ ಸಹಾಯಕ ಅಭಿಯಂತರರಾದ ಅಮಿರ್ ಅಹ್ಮದ್, ಗುತ್ತಿಗೆದಾರ ಹರೀಶ, ನಲ್ಮ್ ಯೋಜನೆಯ ಶ್ರೀದೇವಿ, ನೆಹರು ಯುವ ಕೇಂದ್ರದ ಸ್ವಯಂ ಸೇವಕರಾದ ರೇಣುಕಾ, ಕಲ್ಲಪ್ಪ, ಅಮೃತ್ ಪಿ.ಡಿ.ಎಂ.ಸಿಯ ಬೆಂಬಲ ಅಭಿಯಂತರರಾದ ರೇವಣಸಿದ್ದಪ್ಪ ಪಾಟೀಲ್, ಗುಣಮಟ್ಟ ಮೇಲ್ವಿಚಾರಕರಾದ ಪ್ರದೀಪ ಪಾಟೀಲ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜಂಬಗಿ ಕಾಲೋನಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಕಾರ್ಯಕ್ರಮದ ಬಳಿಕ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಲಾಯಿತು.Venue : bidar,

# Road Map #

.