Bidar INFO/Ads/News :: # Video Ads at Rs.1000 onwards*, . # Online Advertisement @ Rs.1000 onwards,*, . # Website Starts 2000 & Software at Rs.11000 onwards*. # Contact : Marketing Executive 9379888100

 Your IP is : 54.227.157.163
SEARCH
S.No. Shop Name
Ad Title
Description
Image
1 Shop Name: MiLifeGoal
Title: ಜಾನಪದ ಸಂಸ್ಕøತಿಯಿಂದ ಸಮೃದ್ಧ
Details: ಜಾನಪದ ಸಂಸ್ಕøತಿಯಿಂದ ಸಮೃದ್ಧ ಜೀವನ: ಬರೂರ ಬೀದರ, ಡಿ.27 (ಕ.ವಾ):- ಜಾನಪದ ಕಲೆ ಹಾಗೂ ಸಂಸ್ಕøತಿಯಿಂದ ನಮ್ಮ ಜೀವನ ಸಮೃದ್ಧವಾಗಲಿದೆ ಎಂದು ತಾಲೂಕು ಪಂಚಾಯತ ಅಧ್ಯಕ್ಷ ವಿಜಯಕುಮಾರ ಬರೂರ ಅಭಿಪ್ರಾಯ ಪಟ್ಟರು. ನಗರದ ರಂಗಮಂದಿರದಲ್ಲಿ ಗುರುವಾರ ಜರುಗಿದ ಜಾನಪದ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಾಡಿನ ಸಂಸ್ಕøತಿ ಹಾಗೂ ಸಂಪ್ರದಾಯ ಸಿಟಿ ಜನರಿಗೆ ಮಾದರಿಯಾಗಬೇಕಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ನೂರಾರು ಆಸ್ಪತ್ರೆಗಳಿದ್ದರೂ ಸರದಿ ಹಾಗೂ ಸಾಲುಗಳು ಹೆಚ್ಚಾಗಿರುತ್ತವೆ. ಇದಕ್ಕೆಲ್ಲ ಸಿಟಿ ಮನುಷ್ಯ ಹೆಚ್ಚಾಗಿ ಅನೇಕ ರೋಗಗಳಿಗೆ ತುತ್ತಾಗಿರುವುದೇ ಮುಖ್ಯ ಕಾರಣ. ಗ್ರಾಮೀಣ ಜನರು ಚೆನ್ನಾಗಿ ಕಾಯಕ ಮಾಡಿ, ಹಾಯಾಗಿ ನಿದ್ರೆ ಮಾಡುವರು. ಅವರ ಬದುಕಿನ ಶೈಲಿ ನಗರವಾಸಿಗಳಿಗೆ ಆದರ್ಶಪ್ರಾಯವಾಗಲಿ ಎಂದು ಹರಸಿದರು. ಬಿ.ಟಾಕಪ್ಪ ಕಣ್ಣೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಮೂಲೆ, ಮೂಲೆಗಳಿಂದ ಜನಪದ ಕಲಾವಿದರು ಇಲ್ಲಿಯ ಕೆಂಪು ಮಣ್ಣಿನ ನಗರಿಗೆ ಆಗಮಿಸಿ ಸಂಸ್ಕøತಿ ವಿನಿಮಯ ಮಾಡಿಕೊಳ್ಳುತ್ತಿರುವರು. ಇದು ದೂರವಿರುವ ನಾಡಿನ ಕಲಾವಿದರನ್ನು ಹತ್ತಿರಕ್ಕೆ ಕರೆಯಿಸಿಕೊಂಡಂತಹ ಅನುಭವ ಇಲ್ಲಿಯ ಜನರಿಗೆ ಆಗುತ್ತದೆ. ಇದು ಕಲಾವಂತಿಕೆ ಶ್ರೀಮಂತಗೊಳ್ಳುವುದರ ಜೊತೆಗೆ ಪರಸ್ಪರ ಸಂಬಂಧಗಳು ಸಹ ಬಲಿಷ್ಟಗೊಳ್ಳುವವು ಎಂದು ಪ್ರತಿಪಾದಿಸಿದರು. ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರುಪಾಕ್ಷ ಗಾದಗಿ ಮಾತನಾಡಿ, ತಾಂತ್ರಿಕ ಜಗತ್ತಿನಲ್ಲಿಂದು ಮನುಷ್ಯ ಮೌನವಾಗಿರುವನು. ವಿಕಾರಾತ್ಮಕ ಗುಣಗಳು ಬೆಳೆದು ವ್ಯಕ್ತಿತ್ವ ವಿಕಸನದಿಂದ ಕುಂಠಿತಗೊಳ್ಳುತ್ತಿರುವ ನಮಗೆ ಜಾನಪದ ಸೊಗಡಿನ ಅನಿವಾರ್ಯತೆ ಇದ್ದು, ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯ ವೃದ್ಧಿಗೂ ಪೂರಕವಾಗಲಿದೆ ಎಂದರು. ಅಕಾಡೆಮಿ ಸದಸ್ಯರಾದ ವಿಜಯಕುಮಾರ ಸೋನಾರೆ, ಪ್ರಕಾಶ ಅಂಗಡಿ, ರಿಜಿಸ್ಟಾರ್ ಸಿದ್ರಾಮ ಶಿಂಧೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಸಹಾಯಕ ನಿರ್ದೇಶಕ ರಾಜಶೇಖರ ವಟಗೆ, ಸಾಹಿತಿ ಪಾರ್ವತಿ ಸೋನಾರೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರೂತಿ ಬೌದ್ದೆ, ಮಾದಿಗ ದಂಡೋರಾ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಫರ್ನಾಂಡಿಸ್ ಹಿಪ್ಪಳಗಾಂವ, ಜಾನಪದ ವಿದ್ವಾಂಸರಾದ ಚಂದ್ರಪ್ಪ ಹೆಬ್ಬಾಳಕರ್, ಮರಿಯಪ್ಪ ಹೊಸಮನಿ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಚಂದ್ರಕುಮಾರ ಮತ್ತು ತಂಡದವರಿಂದ ಹುಲಿ ವೇಷ, ಹನುಮಂತ ನಾಯಕ ಮತ್ತು ತಂಡದವರಿಂದ ಪೂಜಾ ಕುಣಿತ, ಲಕ್ಷ್ಮಣ ಮತ್ತು ತಂಡದವರಿಂದ ತಮಟೆ ವಾದನ, ವೆಂಕಟರಾಮ ಮತ್ತು ತಂಡದಿಂದ ಚಕ್ರಿ ಭಜನೆ, ನಟರಾಜ ಮತ್ತು ತಂಡದಿಂದ ಸೋಮನ ಕುಣಿತ, ಗಣೇಶ ಮತ್ತು ತಂಡದಿಂದ ನಂದಿಧ್ವಜ ಕುಣಿತ, ಚಂದ್ರಪ್ಪ ಹಾಗೂ ತಂಡದಿಂದ ಕೊಂಬು ಕಹಳೆ, ನಾರಾಯಣಪ್ಪ ಹಾಗೂ ತಂಡದಿಂದ ಡೊಳ್ಳು ಕುಣಿತ, ಬಡವ ಗಣಪುಗೌಡ ಹಾಗೂ ತಂಡದಿಂದ ಹಾಲಕ್ಕಿ ಸುಗ್ಗಿ ಕುಣಿತ, ಮಹೇಶ ಮತ್ತು ತಂಡದವರಿಂದ ಪುರವಂತಿಕೆ, ಕಿರಣ ಮತ್ತು ತಂಡದಿಂದ ಕಂಸಾಳೆ, ರಾಜಮ್ಮ ಮತ್ತು ತಂಡದಿಂದ ಪಟಾ ಕುಣಿತ, ಬಿ.ಟಿ ಮಾನವ ಹಾಗೂ ತಂಡದಿಂದ ಕೋಲಾಟ, ಅವಿನಾಶ ಮತ್ತು ತಂಡದಿಂದ ವೀರಗಾಸೆ, ಸಂತೋಷಕುಮಾರ ಮತ್ತು ತಂಡದಿಂದ ಕೋಲುಮೇಳ, ರವಿ ಮತ್ತು ತಂಡದಿಂದ ನಗಾರಿ ವಾದನ, ಬಾಲರಾಜ ಮತ್ತು ತಂಡದಿಂದ ತಮಟೆ ವಾದನ, ಮಧುಕರ ರವಿ ಮತ್ತು ತಂಡದಿಂದ ಡೊಳ್ಳು ಕುಣಿತ, ಆಶಾ ರಾಠೋಡ ಮತ್ತು ತಂಡದಿಂದ ಲಂಬಾಣಿ ಕುಣಿತ, ಯಸುದಾಸ ಅಲಿಯಂಬುರೆ ಅವರಿಂದ ಮುಖವಾಡ ನೃತ್ಯ, ಪವನ ನಾಟೇಕರ ಮತ್ತು ತಂಡದಿಂದ ಜಾನಪದ ಸುಗ್ಗಿ ಕುಣಿತ, ಮಲ್ಲಪ್ಪ ಹೂಗಾರ ಮತ್ತು ತಂಡದಿಂದ ಪುರವಂತಿಕೆ, ಅಂಬರೀಶ ಮತ್ತು ತಂಡದಿಂದ ಹಗಲು ವೇಷ, ಬಸವರಾಜ ಮತ್ತು ತಂಡದಿಂದ ವೀರಗಾಸೆ, ಸಂಜುಕುಮಾರ ಮತ್ತು ತಂಡದಿಂದ ಡೊಳ್ಳು ಕುಣಿತ, ಶಾರೂಬಾಯಿ ಮತ್ತು ತಂಡದಿಂದ ಲಂಬಾಣಿ ಕುಣಿತ, ನಾಗೇಶ ಮತ್ತು ತಂಡದಿಂದ ಗೊಂಬೆ ಕುಣಿತ, ಶೇಷಪ್ಪ ಚಿಟ್ಟಾ ಮತ್ತು ತಂಡದಿಂದ ತಮಟೆ ವಾದನ, ರಾಮಲಿಂಗ ಮತ್ತು ತಂಡದಿಂದ ಡೊಳ್ಳು ಕುಣಿತ, ಶರಣಪ್ಪ ಮತ್ತು ತಂಡದಿಂದ ಚುಟ್ಟಿಕೆ ಮೇಳ, ಸಂಗಮನಾಥ ಮತ್ತು ತಂಡದಿಂದ ಕೋಲಾಟ, ಸೂರ್ಯಕಾಂತ ಮತ್ತು ತಂಡದಿಂದ ತಮಟೆ ವಾದನ, ಶ್ರೀಮಂತ ಮತ್ತು ತಂಡದಿಂದ ಹೆಜ್ಜೆ ಮೇಳ, ನಂಜಪ್ಪ ಮತ್ತು ತಂಡದಿಂದ ಖಣಿ ವಾದನ, ರಾಮನಾಯಕ ಮತ್ತು ತಂಡದಿಂದ ಗೊಂಬೆ ಮೇಳ ಇತ್ಯಾದಿ ಕಲಾ ತಂಡಗಳಿಂದ ಜಾನಪದ ಕಾರ್ಯಕ್ರಮ ಜರುಗಿದವು. ಇದೇ ವೇಳೆ ಶಂಬೆಳ್ಳಿಯ ಪ್ರಭು.ಎಸ್..ವಾಸುದೇವರಿಂದ ಜಾನಪದ ಚಿತ್ರಕಲಾ ಪ್ರದರ್ಶನ, ಗಂಗಮ್ಮ ಫುಲೆ ಅವರಿಂದ ಜಾನಪದ ವಸ್ತು ಪ್ರದರ್ಶನ ಜರುಗಿತು. ದೇವದಾಸ ಚಿಮಕೋಡ ಸ್ವಾಗತಿದರು. ಮಹೇಶ ಗೋರನಾಳಕರ್ ನಿರೂಪಿಸಿದರು. ಎಮ್.ಎಸ್.ಮನೋಹರ್ ವಂದಿಸಿದರು.
Post Id: 4
bidar news

2018-12-27
2 Shop Name:
Title: We Need Strong Opposition Leader by Vinay Biradar
Details: ** Todays Headline ** We Need STRONG Oppostion Leader in the Country, Said by Vinay Biradar [ Earth Public Party , President ] ** Said Today 08/01/2019 , From Bidar @ Bidar Politics Social Media, He Said, We need a leader who understands the issues of People & Country & should raise voice to get justice from Government. -- #EarthPublicParty #VinayBiradar
Post Id: 5
country news

2019-01-08
3 Shop Name: MiLifeGoal
Title: Rahul Gandhi is the WEAKEST OPPOSITION LEADER by Vinay
Details: Today 07/01/2019 , From Bidar @ Bidar Politics Social Media, Mr.Vinay Biradar Says [International Economist & Analyst ] Mr.Rahul Gandhi is the WEAKEST Opposition Leader for the COUNTRY Development. As He as no sense of understanding of People & Country Issues to fight with the Ruling Government for the development of People & Country. AND most shameful is that our Local Congress Party President, MLAs & Ministers are worst Leaders for Bidar District Development, as they are following the Instructions of WEAKEST OPPOSITION LEADER. -- www.facebook.com/VinayBiradar www.facebook.com/BidarPolitics www.facebook.com/BidarDistrict www.facebook.com/CountryVoice
Post Id: 3
country news

2019-01-07
4 Shop Name: MiLifeGoal
Title: ವಿಕಲಚೇತನ ಮಕ್ಕಳಿಗೆ ಸ್ಪೂರ್
Details: ವಿಕಲಚೇತನ ಮಕ್ಕಳಿಗೆ ಸ್ಪೂರ್ತಿ ನೀಡಿ: ಆರ್.ರಾಘವೇಂದ್ರ ಬೀದರ, ಡಿ.28 (ಕ.ವಾ):- ಪೋಷಕರು ತಮ್ಮ ವಿಕಲಚೇತನ ಮಕ್ಕಳನ್ನು ಬೇಸರದಿಂದ ಕಾಣದೇ ಅವರಲ್ಲಿ ಸ್ಪೂರ್ತಿ ತುಂಬಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ. ಆರ್.ಅವರು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್, ಬೀದರ ವಕೀಲರ ಸಂಘ ಮತ್ತು ಹರಿ ಓಂ ಜ್ಞಾನದೀಪ ರೂರಲ್ ಎಜುಕೇಷನ್ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಡಿ.28 ರಂದು ನೌಬಾದ ವಿಶ್ವಾಸಧಾಮ ನಗರದಲ್ಲಿರುವ ವಿಶ್ವಾಸ ಬುದ್ದಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಕಲಚೇತನರು ಸಾಮಾನ್ಯ ವ್ಯಕ್ತಿಗಳಿಗಿಂತ ಭಿನ್ನವಾಗಿದ್ದು, ಅವರಲ್ಲಿ ಯಾವುದೇ ರೀತಿಯ ಕಲ್ಮಶಗುಣಗಳು ಇರುವುದಿಲ್ಲ ಹಾಗಾಗಿ ಅಂತಹ ಮಕ್ಕಳನ್ನು ತಾತ್ಸಾರದಿಂದ ಕಾಣದಿರಿ. ಅವರಲ್ಲಿಯೂ ಆಘಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ತಿಳಿಸಿದರು. ಅಪ್ಪರಾವ್ ಜ್ಯಾಂತಿ ಪ್ರಾಸ್ತಾವಿಕ ಮಾತನಾಡಿದರು. ಮಾರುತಿ ಹೆಲ್ತ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಮಾರುತಿರಾವ ಚಂದನಹಳ್ಳಿಕರ್ ಅಧ್ಯಕ್ಷತೆ ವಹಿಸಿದ್ದರು. ಹರಿ ಓಂ ಜ್ಞಾನದೀಪ ರೂರಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಸಂತೋಷ ಎಂ.ಭಾಲ್ಕೆ, ವೈದ್ಯರಾದ ಭೀಮರಾವ ಸಿಂಗೋಡೆ, ಭಗತ್‍ಸಿಂಗ್ ಬ್ರಿಗೇಡ್‍ನ ಜಸ್‍ಪ್ರೀತ್‍ಸಿಂಗ್, ಶಾಂತಕುಮಾರ ರಾಯಗೋಳ, ವಕೀಲರಾದ ದಯಾನಂದ, ಶಿವರಾಜ ಕಾಡವಾದ, ಪಿ.ಸಂಗಪ್ಪ, ಕಾನೂನು ಸೇವೆಗಳ ಪ್ರಾಧಿಕಾರದ ಶಂಕರೆಪ್ಪ ಜನಕಟ್ಟಿ ಹಾಗು ಇತರರು ಉಪಸ್ಥಿತರಿದ್ದರು. ಬಂಡೆಪ್ಪ ಕಾಡವಾದ ನಿರೂಪಿಸಿದರು. ಭಾನುಶ್ರಿ ಸ್ವಾಗತ ಗೀತೆ ಹಾಡಿದರು. ಒಳಚರಂಡಿ ಸಂಪರ್ಕ ಪಡೆದು ಶುಚಿತ್ವಕ್ಕೆ ಸಹಕರಿಸಿ: ಆನಂದ ಎಲ್.ಎನ್ ಬೀದರ, ಡಿ.28 (ಕ.ವಾ):- ನಗರ ನಿವಾಸಿಗಳು ಒಳಚರಂಡಿಯ ಗೃಹ ಸಂಪರ್ಕ ಪಡೆದು ನಗರದಲ್ಲಿ ಶುಚಿತ್ವ ಕಾಪಾಡಲು ಮುಂದಾಗಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಆನಂದ ಎಲ್.ಎನ್ ಅವರು ತಿಳಿಸಿದರು. ಬೀದರ ನಗರ ಸಭೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಡಿ.27ರಂದು ಬೀದರ್‍ನ ಶಾಸ್ತ್ರಿ ನಗರದ ಉದ್ಯಾನವನದಲ್ಲಿ ನಡೆದ ಅಮೃತ ಯೋಜನೆಯ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರಗಳನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಅಮೃತ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಬೀದರ ನಗರದಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದು, ಸಾರ್ವಜನಿಕರು ಈ ಒಳಚರಂಡಿಗೆ ಗೃಹ ಸಂಪರ್ಕವನ್ನು ಪಡೆದುಕೊಳ್ಳಬೇಕು ಎಂದು ಅವರು ಕೋರಿದರು. ಸಾಮಾಜಿಕ ಅಭಿವೃದ್ಧಿ ತಜ್ಞರಾದ ಎಂ.ಜೆ.ದೇವೂರ ಪ್ರಾಸ್ತಾವಿಕವಾಗಿ ಮಾತನಾಡಿ, ಅಮೃತ್ ಯೋಜನೆಯ ಗುರಿ ಮತ್ತು ಉದ್ದೇಶಗಳ ಬಗ್ಗೆ ವಿವರಣೆ ನೀಡಿದರು. ನಗರ ಸಭೆಯ ನಲ್ಮ್ ಯೋಜನೆಯ ಸಮುದಾಯ ವ್ಯವಹಾರಗಳ ಅಧಿಕಾರಿ ಮಾರ್ಕ್ ಅವರು ಮಾತನಾಡಿ, ಮಹಿಳಾ ಸ್ವಸಹಾಯ ಸಂಘದÀ ಎಲ್ಲಾ ಸದಸ್ಯರುಗಳು ಅಮೃತ್ ಯೋಜನೆಯನ್ನು ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಸ್.ಎಸ್ ರಾಯಕೋಟಿ, ಸಹಾಯಕ ಅಭಿಯಂತರರಾದ ಎಂ.ಡಿ ಜಾಫರ್, ನಗರ ಸಭೆಯ ಅಮೃತ್ ಯೋಜನೆಯ ಸಹಾಯಕ ಅಭಿಯಂತರರಾದ ಅಮಿರ್ ಅಹ್ಮದ್, ಗುತ್ತಿಗೆದಾರ ಹರೀಶ, ನಲ್ಮ್ ಯೋಜನೆಯ ಶ್ರೀದೇವಿ, ನೆಹರು ಯುವ ಕೇಂದ್ರದ ಸ್ವಯಂ ಸೇವಕರಾದ ರೇಣುಕಾ, ಕಲ್ಲಪ್ಪ, ಅಮೃತ್ ಪಿ.ಡಿ.ಎಂ.ಸಿಯ ಬೆಂಬಲ ಅಭಿಯಂತರರಾದ ರೇವಣಸಿದ್ದಪ್ಪ ಪಾಟೀಲ್, ಗುಣಮಟ್ಟ ಮೇಲ್ವಿಚಾರಕರಾದ ಪ್ರದೀಪ ಪಾಟೀಲ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜಂಬಗಿ ಕಾಲೋನಿಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಕಾರ್ಯಕ್ರಮದ ಬಳಿಕ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಲಾಯಿತು.
Post Id: 2
bidar news

2018-12-28
5 Shop Name: MiLifeGoal Bidar Jobs
Title: Chief Minister Shri.HD Kumarswamy Visit to bidar
Details: ಬರಪೀಡಿತ ಪ್ರದೇಶದಲ್ಲಿ ನೀರು ಪೂರೈಕೆಗೆ ಒತ್ತು ಕೊಡಿ: ಸಿಎಂ ಎಚ್.ಡಿ.ಕುಮಾರಸ್ವಾಮಿ ಬೀದರ, ನ.15 (ಕ.ವಾ):- ಜಿಲ್ಲೆಯ ನಾಲ್ಕು ಬರಪೀಡಿತ ತಾಲೂಕುಗಳಲ್ಲಿ ನೀರು ಪೂರೈಕೆ ಕ್ರಮಕ್ಕೆ ಮೊದಲ ಆದ್ಯತೆ ಕೊಡಿ. ಯಾವುದೆ ಹಳ್ಳಿಯ ಜನತೆ ನೀರು ಕೊಡಿ ಎಂದು ಕೇಳುತ್ತ ತಮ್ಮಲ್ಲಿ ಬರಬಾರದು. ಈ ಬಗ್ಗೆ ತಾವೆಲ್ಲರೂ ಮುತುವರ್ಜಿ ವಹಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಎಲ್ಲ ಶಾಸಕರಿಗೆ ತಿಳಿಸಿದರು. ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನ.15ರಂದು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕುಡಿವ ನೀರು ಪೂರೈಕೆ ಕಾರ್ಯಕ್ಕೆ ಹಣಕಾಸಿನ ಕೊರತೆ ಇಲ್ಲ. ಈಗಾಗಲೇ ಬರಪೀಡಿತ ಎಲ್ಲ ತಾಲೂಕುಗಳಲ್ಲಿ ಕುಡಿವ ನೀರು ಪೂರೈಕೆಗೆ ಕ್ರಮವಹಿಸಲು ತಲಾ 50 ಲಕ್ಷ ರೂ ನೀಡಲಾಗಿದೆ. ಮೊದಲ ಹಂತದಲ್ಲಿ ಈಗಾಗಲೇ 25 ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಅವರು ಶಾಸಕರಿಗೆ ಮಾಹಿತಿ ನೀಡಿದರು. ಅಗತ್ಯ ಇರುವ ಕಡೆಗಳಲ್ಲಿ ತಾವುಗಳು ಕೂಡಲೇ ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿಯವರಿಗೂ ಕೂಡ ಸಿಎಂ ಆದೇಶಿಸಿದರು. ಈ ವೇಳೆ ಮಾತನಾಡಿದ ಸಹಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ, ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಾಲೋಚಿಸಲಾಗಿದೆ. ಎಲ್ಲಿ ನೀರಿನ ಸಮಸ್ಯೆ ಇದೆಯೋ ಅಲ್ಲಿ ಕೂಡಲೇ ಹೊಸ ಕೊಳವೆಬಾವಿ ಕೊರೆಯಿಸಿ ಕ್ರಮವಹಿಸಲು ಈಗಾಗಲೇ ಡಿಸಿ ಅವರಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು. ಬರಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳುವ ಎಲ್ಲ ಕ್ರಮಗಳನ್ನು ಭಾಲ್ಕಿ ತಾಲೂಕಿನಲ್ಲಿ ಕೂಡ ನಡೆಸಬೇಕು ಎಂದು ಅವರು ತಿಳಿಸಿದರು. ಗಣಿ ಮತ್ತು ಭೂವಿಜ್ಞಾನ ಹಾಗೂ ಮುಜರಾಯಿ ಸಚಿವರಾದ ರಾಜಶೇಖರ ಪಾಟೀಲ ಅವರು ಮಾತನಾಡಿ, ಹುಮನಾಬಾದ್ ತಾಲೂಕಿನ ಕೆಲ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಕುಡಿವ ನೀರಿಗೆ ಕ್ರಿಯಾಯೋಜನೆ: ಶಾಸಕರಾದ ರಹೀಂ ಖಾನ್ ಅವರು ಮಾತನಾಡಿ, ಬೀದರ ನಗರದಲ್ಲಿ ಹಿಂದಿಗಿಂತ ಈ ಬಾರಿ ಕುಡಿವ ನೀರಿನ ಸಮಸ್ಯೆ ತುಸು ಹೆಚ್ಚಿದೆ. ತಾವುಗಳು ಕುಡಿವ ನೀರಿನ ಪೂರೈಕೆಗೆ ವಿಶೇಷ ಪ್ಯಾಕೇಜ್ ನೀಡಿದ್ದು ಸಹಾಯವಾಗಿದೆ ಎಂದು ಮುಖ್ಯಮಂತ್ರಿ ಅವರಿಗೆ ಅಭಿನಂದಿಸಿದರು. ನಗರದ ಕೆಲವು ಕಡೆಗಳಲ್ಲಿ ಕುಡಿವ ನೀರು ಸಮರ್ಪಕವಾಗಿ ಬರುತ್ತಿಲ್ಲ. ಬೋರವೆಲ್ ಕೊರೆದರು ಕೂಡ ನೀರು ಸಿಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ಅವರು ಸಭೆಗೆ ತಿಳಿಸಿದರು. ಹಳೆಯ ಬೀದರ ಸಿಟಿ ಸೇರಿದಂತೆ ನಗರದ ಎಲ್ಲಾ ಕಡೆಗಳಲ್ಲಿ ನೀರಿನ ಸಮರ್ಪಕ ಪೂರೈಕೆಗಾಗಿ ಕೋಟಿ ರೂ.ದ ಕ್ರಿಯಾಯೋಜನೆಯೊಂದನ್ನು ಸಿದ್ದಪಡಿಸಿ ಕ್ರಮವಹಿಸುತ್ತಿದ್ದೇವೆ ಎಂದು ಸಿಎಂಸಿ ಕಮಿಷನರ್ ಪ್ರತಿಕ್ರಿಯಿಸಿದರು. ಈ ವೇಳೆ ಜಿಲಾಧಿಕಾರಿಗಳಾದ ಡಾ.ಹೆಚ್.ಆರ್.ಮಹಾದೇವ ಅವರು ಮಾತನಾಡಿ, ಜಿಲೆಯಲ್ಲಿ ಎಲ್ಲಿಯೂ ಕೂಡ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು. ಮುಖ್ಯಮಂತ್ರಿ ಅವರಿಗೆ ಅಭಿನಂದನೆ: ಭಾಲ್ಕಿ ಶಾಸಕರಾದ ಈಶ್ವರ ಖಂಡ್ರೆ ಅವರು ಮಾತನಾಡಿ, ಒಂದೇ ಹಂತದಲ್ಲಿ ತಾವು ದಾಖಲೆಯ 45 ಸಾವಿರ ಕೋಟಿ ರೂ.ನಷ್ಟು ರೈತರ ಸಾಲವನ್ನು ಮನ್ನಾ ಮಾಡಿದ್ದಕ್ಕೆ ತಮಗೆ ಅಭಿನಂದನೆಗಳು ಎಂದು ತಿಳಿಸಿದರು. ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬಿಎಸ್‍ಎಸ್‍ಕೆ ಕಾರ್ಖಾನೆಯ ಪುನಾರಂಭಕ್ಕೆ ಕ್ರಮವಹಿಸಬೇಕು. ನಗರೋತ್ಥಾನ ಮತ್ತು ವಸತಿ ಯೋಜನೆ ಸರಿಯಾಗಿ ಅನುಷ್ಠಾನವಾಗಬೇಕು. ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು. ಈ ಬಗ್ಗೆ ಡಿಸಿಸಿ ಬ್ಯಾಂಕಿನವರು ಜಿಲ್ಲೆಯಲ್ಲಿ ವ್ಯಾಪಕ ಜಾಗೃತಿ ಮೂಡಿಸಿದ್ದಾರೆ ಎಂದು ಸಚಿವರಾದ ಬಂಡೆಪ್ಪ ಖಾಶೆಂಪೂರ ಪ್ರತಿಕ್ರಿಯಿಸಿದರು. ಈ ಯೋಜನೆಯು ಜಿಲ್ಲೆಯಲ್ಲಿ ಸರಿಯಾಗಿ ಅನುಷ್ಠಾನವಾಗುತ್ತಿದೆ ಎಂದು ಕೃಷಿ ಅಧಿಕಾರಿ ತಿಳಿಸಿದರು. ಔರಾದ್ ತಾಲೂಕಿನಲ್ಲಿ ಕಮಲನಗರ ಹೊಸ ತಾಲೂಕಾಗಿದೆ. ಅಲ್ಲಿ ಅಧಿಕಾರಿಗಳ ನೇಮಕ ಅಗತ್ಯವಾಗಿ ಆಗಬೇಕಿದೆ. ಔರಾದ್ ಪಟ್ಟಣದಲ್ಲಿ ಕೃಷಿ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣವಾಗಬೇಕಿದೆ ಎಂದು ಔರಾದ್ ಶಾಸಕರಾದ ಪ್ರಭು ಚವ್ಹಾಣ ಅವರು ಸಿಎಂ ಅವರಲ್ಲಿ ಕೋರಿದರು. ಕಲ್ಯಾಣಕ್ಕೆ ವಿಶೇಷ ಪ್ಯಾಕೇಜ್ ನೀಡಿ: ಬಸವಕಲ್ಯಾಣ ಕ್ಷೇತ್ರದ ಶಾಸಕರಾದ ಬಿ.ನಾರಾಯಣರಾವ್ ಅವರು ಮಾತನಾಡಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೆರೆಗಳನ್ನು ತುಂಬಿಸಲು, ರಿಂಗರೋಡ್ ನಿರ್ಮಾಣ, ರಸ್ತೆ, ಕುಡಿವ ನೀರು ಪೂರೈಕೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಕ್ಕಾಗಿ ಒಟ್ಟು ಬಸವಕಲ್ಯಾಣ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ 500 ಕೋಟಿ ರೂ ಕೊಡಬೇಕು. ಅನುಭವ ಮಂಟಪಕ್ಕೆ ಈಗಾಗಲೇ ನಿಗದಿಪಡಿಸಿದ 650 ಕೋಟಿ ರೂ ಪೈಕಿ ಈಗ ಸದ್ಯ 100 ಕೋಟಿ ರೂ. ನೀಡಿ ಅದಕ್ಕೆ ತಮ್ಮ ಅವಧಿಯಲ್ಲಿ ಅಡಿಗಲ್ಲು ನೆರವೇರಿಸಬೇಕು ಎಂದು ಸಿಎಂ ಅವರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಮೀನುಗಾರಿಕೆ ಹಾಗೂ ಪಶುಪಾಲನಾ ಇಲಾಖೆ ಸಚಿವರಾದ ವೆಂಕಟರಾವ್ ನಾಡಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಭಾರತಬಾಯಿ ಮಲ್ಲಿನಾಥ ಶೇರಿಕಾರ, ಸಂಸದರಾದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ, ಜಿಪಂ ಉಪಾಧ್ಯಕ್ಷರಾದ ಡಾ.ಪ್ರಕಾಶ ಪಾಟೀಲ, ಈಶಾನ್ಯ ವಲಯ ಪೊಲೀಸ್ ಮಹಾ ನಿರ್ದೇಶಕರಾದ ಮನೀಷ್ ಖರ್ಬಿಕರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ಬೀದರ ಹಾಗೂ ಕಲಬುರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಟಿ.ಶ್ರೀಧರ, ಎನ್.ಶಶಿಕುಮಾರ ಹಾಗು ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
Post Id: 1
bidar news

2018-11-15